Tuesday 22 March 2016

ನಮಗೆ ಗೊತ್ತಿರದ ಭಗತ್ ಸಿಂಗ್

     
     ಮಾರ್ಚ್ 23, 1931 ಶಹೀದ್ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಅರ್ಪಿಸಿದ ದಿನ. ಅತೀ ಕಡಿಮೆ  ವಯಸ್ಸಿನಲ್ಲಿ ಭಗತ್ ಸಿಂಗ್ ಮಾಡಿದ ಸಾಧನೆ ಇಂದಿನ ಯುವಜನತೆಗೆ ಇಂದಿಗೂ ಪ್ರೇರಣೆಯಾಗಿದೆ. ಭಾರತ ಕಂಡ ಅಪ್ರತಿಮ ಕ್ರಾಂತಿಕಾರಿ ಮತ್ತು ಸ್ವಾತಂತ್ರ ಹೊರಾಟಗಾರನ ಬಗ್ಗೆ ತಿಳಿಯದವರೇ ಇಲ್ಲ. ಆದರೂ, ಅವರ ಬಗ್ಗೆ ತಿಳಿಯದ ಕೆಲವುಸಂಗತಿಗಳನ್ನು ಐಬಿಎನ್ ಲೈವ್ ದಾಖಲಿಸಿದೆ.

1. ಭಗತ್ ಕಾಲೇಜಿನಲ್ಲಿ ಉತ್ತಮ ನಟರೂ ಹಾಗಿ ಅನೇಕ ನಾಟಕಗಳಲ್ಲಿ ಭಾಗವಹಿಸಿದ್ದರು. ರಾಣಾ ಪ್ರತಾಪ್, ಸಾಮ್ರಾಟ್ ಚಂದ್ರಗುಪ್ತ, ಭಾರತ ದುರ್ದಶ ಮುಂತಾದ ನಾಟಕಗಳಲ್ಲಿನ ಉತ್ತಮ ಅಭಿನಯಕ್ಕಾಗಿ ಶಿಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು.

2. ಏಪ್ರಿಲ್ 13, 1919ರಂದು ನಡೆದ ಜಲಿಯನ್ ವಾಲಾ ಬಾಗ್ ದುರಂತ ನಡೆದ ದಿನ ಶಾಲೆಯಿಂದ ತಪ್ಪಿಸಿಕೊಂಡ ಹೋದ ಭಗತ್ ಸಿಂಗ್ ದುರಂತ ನಡೆದ ಸ್ಥಳಕ್ಕೆ ಹೋಗಿ ಖಾಲಿ ಬಾಟಲಿಯಲ್ಲಿ ರಕ್ತಸಿಕ್ತವಾಗಿದ್ದ ಮಣ್ಣನ್ನು ತುಂಬಿಕೊಂಡು ಬಂದಿದ್ದ. ನಂತರ ಅದನ್ನು ಪ್ರತಿದಿನವೂ ಪೂಜಿಸುತ್ತಿದ್ದ. ಆಗ ಅವನಿಗೆ ಕೇವಲ 12 ವಯಸ್ಸು. 

3. ಚಿಕ್ಕವನಿದ್ದಾಗ ಭಗತ್ ಸಿಂಗ್ ಬ್ರಿಟಿಷರೊಂದಿಗೆ ಹೋರಾಟ ನಡೆಸಲು ಹೊಲಗದ್ದೆಗಳಲ್ಲಿ ಭತ್ತದ ಬದಲು ಬಂದೂಕುಗಳನ್ನು ಬೆಳೆಯಬೇಕೆಂದು ಎಲ್ಲರೆದಿರು ಹೇಳುತ್ತಿದ್ದ ಕ್ರಾಂತಿ ಎಂಬುದು ಬಾಲ್ಯದಿಂದಲೆ ಆತನನ್ನು ಆವರಿಸಿತ್ತು.

4. ಬಾಲ್ಯ ವಿವಾಹವನ್ನು ತಪ್ಪಿಸಿಕೊಳ್ಳಲು ಭಗತ್ ಮನೆಯಿಂದ ಪರಾರಿಯಾಗಿದ್ದ. ಮದುವೆಯಾಗುವುದು ಏನು ದೊಡ್ಡ ಸಾಧನೆಯಾ? ಎಂದು ತನ್ನ ಸಹಪಾಠಿಗಳನ್ನು ಕೇಳುತ್ತಿದ್ದ. ಮದುವೆ ಯಾರಾದರೂ ಆಗಬಹುದು, ಆದರೆ ನನ್ನ ಗುರಿ ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಎಂದು ಎದೆತಟ್ಟಿ ಹೇಳುತ್ತಿದ್ದ. 

5. ಲೆನಿನ್ ನ ಅಕ್ಟೋಬರ್ ಕ್ರಾಂತಿ ಭಗತ್ ನನ್ನು ಬಹುವಾಗಿ ಆಕರ್ಷಿಸಿತು. ಚಿಕ್ಕಪ್ರಾಯದಲ್ಲೇ ಸಾಮಾಜಿಕ ಕ್ರಾಂತಿ ಕುರಿತ ಅನೇಕ ಪುಸ್ತಕಗಳನ್ನು ಓದಲಾರಂಭಿಸಿದ.

6. ಸಿಂಗ್ ಹೇಳಿದ ಈ ಮಾತು ಎಂದಿಗೂ ಅಜರಾಮರ, "ಅವರು ನನ್ನನ್ನು ಕೊಲ್ಲಬಹುದು, ಆದರೆ ನನ್ನ ಚಿಂತನೆಗಳನ್ನು ಕೊಲ್ಲಲಾರರು. ಅವರು ನನ್ನ ದೇಹವನ್ನು ಹೊಸಕಿ ಹಾಕಬಹುದು, ಆದರೆ ನನ್ನ ಸ್ಫೂರ್ತಿಯನ್ನು ಹೊಸಕಿ ಹಾಕಲು ಸಾಧ್ಯವೇ ಇಲ್ಲ.

7. ದೆಹಲಿಯ ಸೆಂಟ್ರಲ್ ಅಸೆಂಬ್ಲಿಯ ಮೇಲೆ ಭಗತ್ ಮತ್ತು ಸಹಚರರು ಎಸೆದ ಬಾಂಬುಗಳು ಕಡಿಮೆ ತಾಕತ್ತಿನ ಸ್ಫೋಟಕಗಳಾಗಿದ್ದವು. ಅಲ್ಲಿ ಕಾರಿಡಾರಿನಲ್ಲಿ ನೆರೆದಿದ್ದ ಜನರನ್ನು ಬೆದರಿಸಿ ಓಡಿಸಲು ಮಾತ್ರ ಅವನ್ನು ಬಳಸಲಾಗಿತ್ತು. ಇದನ್ನು ಬ್ರಿಟಿಷ್ ತನಿಖೆ ಕೂಡ ದೃಢಪಡಿಸಿದೆ. 




8. 1930ರಲ್ಲಿ ಜೈಲಿನಲ್ಲಿದ್ದಾಗ 'ರಾಜಕೀಯ ಸೆರೆಯಾಳು' ಎಂಬ ಪದವನ್ನು ಹುಟ್ಟುಹಾಕಿದ್ದೇ ಭಗತ್. ತನಗೆ ಮತ್ತು ತನ್ನ ಸಹಚರರಿಗೆ ಎಲ್ಲ ಸವಲತ್ತುಗಳನ್ನು ಕೊಡಬೇಕೆಂದು ಆಗ್ರಹಿಸಿದ್ದರು. ಅಲ್ಲಿ ಬ್ರಿಟಿಷ್ ಕಳ್ಳರು, ದಂಗೆಕೋರರಿಗೆ ನೀಡುತ್ತಿದ್ದ ಸವಲತ್ತುಗಳನ್ನು ಭಾರತೀಯ ಕೈದಿಗಳಿಗೆ ನೀಡುತ್ತಿರಲಿಲ್ಲ. 

9. " ಇನ್ ಕ್ವಿಲಾಬ್ ಜಿಂದಾಬಾದ್ " ಎಂದು ಘೋಷಣೆ ಮಾಡಿದ್ದು ಭಗತ್ ಸಿಂಗ್. ಮುಂದೆ ಇದೇ ಘೋಷಣೆ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಘೋಷವಾಕ್ಯವೂ ಆಯಿತು. 

10. ನಿಗದಿಪಡಿಸಿದ ವೇಳೆಗಿಂತ ಒಂದು ಗಂಟೆ ಮೊದಲೇ ಭಗತ್ ನನ್ನು ಗಲ್ಲಿಗೇರಿಸಲಾಯಿತು ಮತ್ತು ರಹಸ್ಯವಾಗಿ ಆತನ ಸತ್ಲೆಜ್ ನದಿಯ ತಟದ ಮೇಲೆ ಜೈಲು ಅಧಿಕಾರಿಗಳಿಂದ ಅಂತ್ಯಕ್ರಿಯೆ ನಡೆಸಲಾಯಿತು. ಇದು ಜನರ ಕಿವಿಗೆ ಬೀಳುತ್ತಿದ್ದಂತೆ ಪ್ರತಿಭಟನೆ ನಡೆಸಿ ಆತನ ಚಿತಾಭಸ್ಮದೊಡನೆ ಮೆರವಣಿಗೆಯನ್ನೂ ನಡೆಸಿದರು.


No comments:

Post a Comment