Tuesday, 22 March 2016

ಎಂದೂ ಅಳಿಯದ ಮಹಾನ್ ಚೇತನ "ಶಹೀದ್ ಭಗತ್ ಸಿಂಗ್"

ರಾಜಕೀಯ ನಾಯಕರು ಮರೆತ ನಮ್ಮ ಭಗತ್ ಸಿಂಗ್




45 ವರ್ಷವಾದರು ಇನ್ನೂ ಯುವಕರ ಪ್ರತಿನಿಧಿ ಎಂದು ಬಿಂಬಿಸಿಕೊಳ್ಳುವ " ಕಾಂಗ್ರೇಸ್ ಯುವರಾಜ " ಒಂದು ಕಡೆಯಾದರೆ, ತನ್ನ 23ನೇ ವಯಸ್ಸಿಗೆ ದೇಶಕ್ಕಾಗಿ ಪ್ರಾಣತೆತ್ತ ಮಹಾನ್ ದೇಶಪ್ರೇಮಿ ಮತ್ತೊಂದೆಡೆ. ವಯಸ್ಸು 45 ಆದ್ರು ಇನ್ನು ಅಮ್ಮನ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುವ ವ್ಯಕ್ತಿಗೆ ಯುವರಾಜನ ಪಟ್ಟಾ ಕಟ್ಟೋ ಕಾಂಗ್ರೇಸ್ಸಿಗರು, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ವ್ಯಕ್ತಿಗೆ ಹುತಾತ್ಮ ಎಂದು ಹೇಳಲು ಹಿಂಜರಿಯುವುದು ಬಹಳ ದುರ್ದೈವದ ಸಂಗತಿ. 1907 ಸೆಪ್ಟೆಂಬರ್ 27 ರಂದು ಹುಟ್ಟಿ ಕೇವಲ 23 ವರ್ಷದವರಿದ್ದಾಗಲೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ಸ್ವಾತಂತ್ರ್ಯಯೋಧ ಶಹೀದ್ ಭಗತ್ ಸಿಂಗ್ ಅವರ ನೆನಪು ಎಷ್ಟು ಜನರಿಗಿದೆ? ಇನ್ ಕ್ವಿಲಾಬ್ ಜಿಂದಾಬಾದ್ ಎನ್ನುತ್ತಲೇ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರಯೋಧನನ್ನು ನೆನೆಯಲು ಪಾಪ ನಮ್ಮ ರಾಜಕಾರಣಿಗಳಿಗೆ ಮರೆವಿನ ರೋಗ. ಕಾಂಗ್ರೆಸ್ ಪಕ್ಷದಿಂದ ಇದನ್ನು ನಿರೀಕ್ಷಿಸಲೂ  ಸಾಧ್ಯವಿಲ್ಲ. ಸ್ವಾತಂತ್ರ್ಯ ಯೋಧರಾದ ಸುಭಾಶ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಅವರಿಗೆ ಭಯೋತ್ಪಾದಕ ಹಣೆಪಟ್ಟಿ ಕಟ್ಟಿದ್ದೇ ಕಾಂಗ್ರೆಸ್ ಪಕ್ಷ. ಈ ಕಾರಣ ಭಗತ್ ಸಿಂಗ್ ಮೊಮ್ಮಗ ಅಭಯ್ ಸಿಂಗ್ ಸಂಧು ಆರೋಪಿಸಿದ್ದರೂ ಕೂಡ.  ಇಂದು ನೆಹರು-ಗಾಂಧಿ ಜಯಂತಿಯನ್ನು ಸರ್ಕಾರ ನಡೆಸಿದರೆ, ಭಗತ್-ಸಾವರ್ಕರ್ ಜನ್ಮದಿನಾಚರಣೆ ದೇಶದ ಯುವಕರು ನಡೆಸುತ್ತಾರೆ. ಇದು ದೇಶಭಕ್ತನಿಗೆ ದೇಶದ ಜನತೆ ತೊರುವ ಅಭಿಮಾನ. ಭಾರತದ ಸ್ವಾತಂತ್ರ್ಯಕ್ಕಾಗಿ ಉಗ್ರ ಹೋರಾಟ ನಡೆಸಿದ್ದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು 1931ರ ಮಾರ್ಚ್ 23ರಂದು ನೇಣಿಗೇರಿಸಲಾಗಿತ್ತು. ಇವರಲ್ಲಿ ಭಗತ್ ಸಿಂಗ್ ಅವರನ್ನು ಅತ್ಯಂತ ಪ್ರಭಾವಶಾಲಿ ಕಾಂತ್ರಿಕಾರಿ ನಾಯಕ ಎಂದು ಬಣ್ಣಿಸಲಾಗಿದೆ. ನೌಜವಾನ್ ಭಾರತ್ ಸಭಾ, ಕೀರ್ತಿ ಕಿಸಾನ್ ಪಾರ್ಟಿ, ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಮುಂತಾದ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಭಗತ್ ಯುವಕರಲ್ಲಿ ಸ್ವಾತಂತ್ರ್ಯದ ಕಿಡಿ ಹಚ್ಚಿದ್ದರು. ಭಗತ್ ಅಂದು ಮಾತ್ರವಲ್ಲ ಯುವಕರಿಗೆ ಇಂದಿಗೂ ಸ್ಫೂರ್ತಿದಾಯಕವಾಗಿದ್ದಾರೆ. ಲಾಲಾ ಲಜಪತ್ ರಾಯ್ ಅವರ ಕೊಲೆಗೆ ಪ್ರತೀಕಾರವಾಗಿ ಬ್ರಿಟಿಷ್ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟು ಸಾಯಿಸಿದ ಆರೋಪ ಹೊತ್ತಿದ್ದ ಭಗತ್ ಜೈಲಿನಲ್ಲಿ ಕೂಡ ಭಾರತೀಯ ಜೈಲುಹಕ್ಕಿಗಳಿಗೆ ಬ್ರಿಟಿಷರಷ್ಟೇ ಸ್ವಾತಂತ್ರ್ಯ ನೀಡಬೇಕೆಂದು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇನ್ನೂ ಮೀಸೆ ಚಿಗುರುವ ಹಂತದಲ್ಲಿಯೇ ಮುರುಟಿಹೋದ ವೀರಯೋಧನಿಗೆ ಈ ಮೂಲಕವಾದರೂ ನೆನೆಯೋಣ. ಅವರ ಸ್ಫೂರ್ತಿ ಸೆಲೆಯನ್ನು ಜೀವಂತವಾಗಿಡೋಣ.





2 comments:

  1. Nice article.. Good job, we can never forget the unforgettable martyr

    ReplyDelete
    Replies
    1. Thank you. Hope you will get more articles about true freedom fighters in my blog. :-)

      Delete