ಸಿಕ್ಸ್ ಪ್ಯಾಕ್ ಮಾಡಬೇಕೇ ? ಬೆಳಿಗ್ಗೆ ಎರಡು ಗಂಟೆ, ಸಂಜೆ ಎರಡು ಗಂಟೆ ಜಿಮ್ ಮಾಡಿ, ದಿನಾಲು ಹತ್ತು ಕಿಮೀ ಓಡಿ. ದಿನಾಲೂ ಒಂದು ಸಾವಿರ ಸಿಟ್ ಅಪ್ಸ್ ಹೊಡೆಯಿರಿ. ಕಟ್ಟುನಿಟ್ಟಿನ ಆಹಾರ ಸೇವಿಸಿ. ಬೆಳಿಗ್ಗೆ ಮೂರು ಮೊಟ್ಟೆ, ಓಟ್ಸ್ , ಮಧ್ಯಾಹ್ನ ಒಂದು ಒಣ ಚಪಾತಿ ನೂರು ಗ್ರಾಂ ಚಿಕನ್ , ರಾತ್ರಿ ರಿಪೀಟ್. ಜಿಡ್ಡಿನ ಅಂಶ ಸುತಾರಾಂ ಕೂಡದು. ಇಷ್ಟೇ.
ನಿಲ್ಲಿ. ದಿನಕ್ಕೆ ನಾಲ್ಕೈದು ಗಂಟೆ ಜಿಮ್ ಮಾಡಿದರೆ, ಬೇರೆ ಉದ್ಯೋಗ, ದಂಧೆ , ವಿದ್ಯಾಭ್ಯಾಸ ಮಾಡುವುದು ಹೇಗೆ ? ಇಷ್ಟೆಲ್ಲ ವ್ಯಾಯಾಮ ಮಾಡಿ ಇಷ್ಟು ಕಡಿಮೆ ತಿನ್ನಲು ಎಷ್ಟು ದಿನ ಅಂತ ಸಾಧ್ಯ ?
ಮೊದಲೆಲ್ಲ ಜನ ಹೀಗೆಲ್ಲ ಮಾಡಿ ಬಾಡಿಬಿಲ್ಡ್ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ. "ಡೋಂಟ್ ವರ್ಕ್ ಹಾರ್ಡ್, ವರ್ಕ್ ಸ್ಮಾರ್ಟ್" ಅನ್ನುವುದು ಈಗಿನ ಟ್ರೆಂಡ್.
ಅರ್ನಾಲ್ಡ್ ಶ್ವಾರ್ಝ್ನೇಗರ ದಿನಕ್ಕೆ ಮೂರು ನಾಲ್ಕು ಗಂಟೆಗಳ ಕಾಲ ಜಿಮ್ ಮಾಡುವ ಪದ್ಧತಿ ಹುಟ್ಟುಹಾಕಿದ್ದ. ಆದರೆ ಆಗ ವಿಜ್ಞಾನ ಇಷ್ಟರ ಮಟ್ಟಿಗೆ ಇರಲಿಲ್ಲ. ಕಾಲ ಕಳೆದಂತೆ ಮಸಲ್ಸ್ ಬೆಳೆಸುವ ಹೊಸ ವಿಧಾನಗಳು ಬಂದವು. ಈಗ ವಿಜ್ಞಾನ ಹೇಳುತ್ತದೆ ಒಂದೇ ಸಲಕ್ಕೆ ಒಂದು ಗಂಟೆಗೂ ಹೆಚ್ಚು ಸಮಯ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಕಾರ್ಟಿಸಾಲ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಟೆಸ್ಟಾಸ್ಟೆರೋನ್ ಲೆವಲ್ ಕಡಿಮೆ ಆಗುತ್ತದೆ. ಕಾರ್ಟಿಸಾಲ್ ಮಸಲ್ಸ್ ಗಳನ್ನೇ ತಿನ್ನುವ ಹಾರ್ಮೋನ್. ಹಾಗಾಗಿ ವೇಯ್ಟ್ ಟ್ರೇನಿಂಗ್ ಸೆಶ್ಶನ್ ಒಂದು ಗಂಟೆಗೂ ಮೀರಬಾರದು ಅಂತ. ತೀರಾ ಅವಶ್ಯಕತೆ ಇದ್ದರೆ ದಿನಕ್ಕೆ ಎರಡು ಬಾರಿ, ಒಂದು ಗಂಟೆಯ ಕಾಲ ಮಾಡಬಹುದು.
ಮಸಲ್ಸ್ ಜಿಮ್ ನಲ್ಲಿ ಬೆಳೆಯುವುದಿಲ್ಲ. ಮಸಲ್ಸ್ ಜಿಮ್ ಮುಗಿದ ನಂತರ ಕೊಡುವ ರೆಸ್ಟ್ ನಲ್ಲಿ ಬೆಳೆಯುತ್ತವೆ. ಯ್ಯಾಬ್ಸ್ ಕೂಡ ಮಸಲ್ಸ್. ಹಾಗಾಗಿ ದಿನಾಲೂ ಯ್ಯಾಬ್ಸ್ ಹೊಡೆದರೆ ಅದಕ್ಕೆ ಬೆಳೆಯಲು ಅವಕಾಶ ಸಿಗುವುದಿಲ್ಲ.
6 ಪ್ಯಾಕ್ ಯ್ಯಾಬ್ಸ್ ವೈಜ್ಞಾನಿಕ ವಾಗಿ ಒಂದೇ ಮಸಲ್. ರೆಕ್ಟಸ್ ಅಬ್ಡೋಮನಿಸ್ ಅಂತ ಇದರ ಹೆಸರು . 8 ಪ್ಯಾಕ್ ಯ್ಯಾಬ್ಸ್ ಅಂತೆಲ್ಲ ಇರುವುದಿಲ್ಲ. 6 ಪ್ಯಾಕ್ ಯ್ಯಾಬ್ಸ್ ತೀರಾ ಕಟ್ ಆದಾಗ, ದೇಹದ ಫ್ಯಾಟ್ ತೀರಾ ಕಡಿಮೆಯಾದಾಗ ಅಕ್ಕಪಕ್ಕದ ಏರಿಯಾ ಆ ತರ ಕಾಣುತ್ತದೆ ಅಷ್ಟೇ.
ರೆಕ್ಟಸ್ ಅಬ್ಡೋಮನಿಸ್ ಜಗತ್ತಿನ ಪ್ರತೀಯೊಬ್ಬನಿಗೂ ಇರುತ್ತದೆ. ಹುಟ್ಟಿದ ಮಗುವಿನಿಂದ ಹಿಡಿದು , ನೂರರ ಮುದುಕನ ತನಕ ಎಲ್ಲರಿಗೂ ಸಹ.
ಬಾಡಿ ಫ್ಯಾಟ್ ಪರ್ಸೆಂಟೇಜ್ ಹತ್ತಕ್ಕಿಂತ ಕಡಿಮೆ ಯಾದರೆ 6 ಪ್ಯಾಕ್ ಯ್ಯಾಬ್ಸ್ ಅಟೋಮ್ಯಾಟಿಕಲಿ ರೆಡಿ. ಹೀಗಾಗಿ ನೀವು ಎಷ್ಟೇ ಜಿಮ್ ಮಾಡಿದರೂ, ಬಾಡಿ ಫ್ಯಾಟ್ ಹೋಗುವ ತನಕ ಇವು ಕಾಣಲಾರವು.
ಈಗ ಬಾಡಿ ಫ್ಯಾಟ್ ಕಡಿಮೆ ಆಗುವಂತೆ ಮಾಡಲು ನೂರಾರು ವಿಧಾನಗಳಿವೆ. ಈ ಎಲ್ಲವೂ ಶುರುವಿನಲ್ಲಿ ಕೆಲಸ ಮಾಡಿ ಐದಾರು ಕಿಲೋ ವೇಟ್ ಲಾಸ್ ಮಾಡಲು ಸಹಾಯ ಮಾಡುತ್ತವೆ. ಆದರೆ ಅದನ್ನೂ ಮೀರಿ ಹೋಗಲು ಹೆಚ್ಚಿನ ಜನರಿಗೆ ಸಾಧ್ಯವಾಗುವುದಿಲ್ಲ. ಅತೀ ಕಡಿಮೆ ಆಹಾರ ತಿನ್ಧುವುದು, ಉಪವಾಸ ಮಾಡುವುದು ಅತ್ಯಂತ ಅಪಾಯಕಾರಿ. ಉಪವಾಸ ಮಾಡುವದರಿಂದ ದೇಹ ಕೀಟೋಸಿಸ್ ಎಂಬ ಅಪಾಯಕಾರಿ ಸ್ಥಿತಿಗೆ ಬರುತ್ತದೆ. ಹೀಗಾದಾಗ ದೇಹ ಶಕ್ತಿಯ ಮಿತವ್ಯಯಕ್ಕಾಗಿ ಕಡಿಮೆ ತಿಂದರೂ ತೂಕ ಕಡಿಮೆ ಆಗದ ತರ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಮನುಷ್ಯ ನಿಧಾನವಾಗುತ್ತಾನೆ.
ಹಾಗಿದ್ದರೆ ಡಯಟ್ ಹೇಗೆ ಮಾಡಬೇಕು? ಜಗತ್ತಿನಲ್ಲಿ ಐದು ಲಕ್ಷ ತರಹದ ಡಯಟ್ ಇವೆ. ಚಿತ್ರ ವಿಚಿತ್ರ ಡಯಟ್ ಗಳೂ ಇವೆ. ಹೊಟ್ಟೆಯಲ್ಲಿ ಜಂತು ಹುಳ ಆದರೆ, ನಾವು ತಿಂದಿದ್ದನ್ನೆಲ್ಲ ಜಂತು ಹುಳುಗಳೇ ತಿಂದು ನಮಗೆ ಆಹಾರ ಸಿಗುವುದಿಲ್ಲವಾದರೂ ಬೇಕಾದದ್ದು ತಿಂದು ಲೈಫ್ ಎಂಜಾಯ್ ಮಾಡಬಹುದು ಅಂತ ಜಂತು ಹುಳದ ಮೊಟ್ಟೆ ತಿನ್ನುವ ಡಯಟ್ ಕೂಡ ಇದೆ. ಆನ್ ಲೈನ್ ನಲ್ಲಿ ಜಂತು ಹುಳದ ಮೊಟ್ಟೆ ಈಗಲೂ ಲಭ್ಯ. ತೂಕ ಕಡಿಮೆ ಆದ ನಂತರ ಜಂತು ಹುಳದ ಔಷಧಿ ತೆಗೆದುಕೊಂಡರಾಯಿತು. ಆದರೆ ಇವೆಲ್ಲ ಪರಮ ಮೂರ್ಖತನ. ಡಾಕ್ಟರ್ ಆಟ್ಕಿನ್ ಅನ್ನುವವ ಹೈ ಫ್ಯಾಟ್ ಡಯಟ್ ಕಂಡುಹಿಡಿದಿದ್ದ. ದಿನಾಲೂ ಕೇಜಿಗಟ್ಟಲೇ ಬೆಣ್ಣೆ ತುಪ್ಪ ತಿನ್ನುವುದು. ಕಾರ್ಬೋಹೈಡ್ರೇಟ್ಸ್ ತೀರಾ ಕಡಿಮೆ ಮಾಡುವುದು.
ಇದರಿಂದಲೂ ಲಕ್ಷಾಂತರ ಜನ ಇಪ್ಪತ್ತು ಮೂವತ್ತು ಕಿಲೋ ತೂಕ ಕಡಿಮೆ ಮಾಡಿಕೊಂಡರು. ಈತ ಬರೆದ ಪುಸ್ತಕ ವರ್ಲ್ಡ್ ಫೇಮಸ್ ಆಗಿತ್ತು. ಆದರೆ ವಿಜ್ಞಾನಿಗಳು ಆತನಿಗೆ - ಈತ ತರ ಡಯಟ್ ಮಾಡಿ ತೂಕ ಕಡಿಮೆಯಾದರೂ ಜನರಿಗೆ ಹೃದಯದ ತೊಂದರೆ ಆದರೆ ಏನು ಗತಿ ಅಂತ ಪ್ರಶ್ನೆ ಮಾಡಿದಾಗ , ಅಷ್ಟೆಲ್ಲ ಬೆಣ್ಣೆ ತುಪ್ಪ ತಿನ್ನಬೇಡಿ ಅಂತ ಎರಡನೇ ಪುಸ್ತಕ ಬರೆದ ಕೆಲವೇ ತಿಂಗಳಲ್ಲಿ ಸ್ವತಃ ಡಾಕ್ಟರ್ ಆಟ್ಕಿನ್ ಹೃದಯಾಘಾತದಿಂದ ಸತ್ತ.
ಹುಚ್ಚಾಪಟ್ಟೆ ಡಯಟ್ ಮಾಡುವುದಕ್ಕಿಂತ ದಿನಕ್ಕೆ ಹಲವಾರು ಬಾರಿ ಸ್ವಲ್ಪ ಸ್ವಲ್ಪ ತಿನ್ನುವುದು ಒಳ್ಳೆಯದು. ಡಯಟ್ ಮಾಡುವವರಿಗೆ ಎಣ್ಣೆಗಿಂತ ದೊಡ್ಡ ಶತ್ರು "ಸಕ್ಕರೆ". ಸಕ್ಕರೆ, ಮೈದಾ , ಬೇಕರಿ, ಐಸಕ್ರೀಮ್, ಕೋಲ್ಡಡ್ರಿಂಕ್ಸ್ ಮತ್ತು ಕರಿದ ಪದಾರ್ಥಗಳನ್ನು ಬಿಟ್ಬರೆ 90 % ಕೆಲಸ ಮುಗಿಯಿತು.
ಹೈ ಪ್ರೋಟೀನ್ಸ್ ಅಂದರೆ ಕೇವಲ ಚಿಕನ್ ಬ್ರೆಸ್ಟ್ ಮತ್ತು ಮೊಟ್ಟೆಯ ಮೇಲೆ ಇದ್ದರೆ ಸಂಪೂರ್ಣ ಕಟ್ ಬಾಡಿ ಪಡೆಯಬಹುದು. ಆದರೆ ಇದು ಕಿಡ್ನಿಗಳ ಮೇಲೆ ತುಂಬ ಒತ್ತಡ ತರುತ್ತದೆ. ಆದ್ದರಿಂದ ಕಾರ್ಬೋಹೈಡ್ರೇಟ್ಸ್, ಫ್ಯಾಟ್ಸ್ ಕೂಡ ಇರುವ ಡಯಟೇ ಉತ್ತಮ. ಡಯಟ್ ಮಾಡುವವರಿಗೆ ಎಣ್ಣೆ ಸಂಪೂರ್ಣ ವರ್ಜ್ಯವಲ್ಲ. ಡೀಪ್ ಫ್ರೈ ಮಾತ್ರ ವರ್ಜ್ಯ.
ಡಯಟ್ ಮಾಡುವವರು ದಿನಕ್ಕೆ ಇಪ್ಪತ್ತು ಮೂವತ್ತು ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದು ಸಾಮಾನ್ಯ. ಇದರಿಂದ ಹೆಚ್ಚಿನ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಹೀಟ್ ಗೀಟ್ ಏನೂ ಆಗುವುದಿಲ್ಲ. ಆದರೆ ಇದೇ ಮೊಟ್ಟೆಯನ್ನು ಆಮ್ಲೆಟ್ ಮಾಡಿದರೆ ಅದರ ಪ್ರೋಟೀನ್ ಕ್ವಾಲಿಟಿ ಹೋಗುತ್ತದೆ.
ಮೊಳಕೆ ಬರಿಸಿದ ಧಾನ್ಯಗಳು, ಹಸಿ ತರಕಾರಿ, ಬೇಯಿಸಿದ ಇತ್ಯಾದಿ ನೂರಾರು ಬಗೆಗಳನ್ನು ಹೊಟ್ಟೆತುಂಬ ತಿಂದೂ ತೂಕ ಇಳಿಸಿಕೊಳ್ಳಬಹುದು. ಮೊಟ್ಟೆ ತಿನ್ನುವವರಾದರೆ ಯಾವುದೇ ಪ್ರೋಟಿನ್ ಸಪ್ಲಿಮೆಂಟ್ ತೆಗೆದುಕೊಳ್ಳಲೇ ಬೇಕು ಅಂತಿಲ್ಲ. ಹಣ ಖರ್ಚು ಮಾಡುವ ತಾಖತ್ ಇದ್ದರೆ 6 ಪ್ಯಾಕ್ ಸುಲಭ. ಯಾಕೆಂದರೆ ಉತ್ತಮ ಡಯಟ್ ಖರ್ಚಿನ ಬಾಬತ್ತು. ದುಡ್ಡು ಇಲ್ಲದಿದ್ದರೂ ಸ್ವಲ್ಪ ತಲೆ ಉಪಯೋಗಿಸಿದರೆ ರುಚಿ ರುಚಿಯಾದ ಆಹಾರ ತಿಂದು 6 ಪ್ಯಾಕ್ ಮಾಡಬಹುದು.
6 ಪ್ಯಾಕ್ ಮಾಡುವಾಗ ಮೂರು ತಿಂಗಳ ಕಾಲ ಹಣ್ಣುಗಳನ್ನೂ ತಿನ್ನುವುದಿಲ್ಲ. ಹಣ್ಢುಗಳಲ್ಲಿ ಫ್ರುಕ್ಟೋಸ್ ಇರುತ್ತದೆ. ಕೇವಲ ಹಣ್ಣು ತಿಂದೇ ತೂಕ ಇಳಿಸಬಹುದು. ಇದಕ್ಕೆ ಫ್ರೂಟೇಷಿಯನ್ ಡಯಟ್ ಅನ್ನುತ್ತಾರೆ. ಆದರೆ ಹೈ ಪ್ರೋಟಿನ್ ಇದ್ದಾಗ ಫ್ರುಕ್ಟೋಸ್ ನಮ್ಮ ಗುರಿ ತಲುಪುವುದನ್ನು ಡಿಲೇ ಮಾಡುತ್ತದೆ. ಪಪಾಯಾ ಮುಂಸೊಂಬಿ ಕಿತ್ತಳೆ ಮತ್ತು ಕಲ್ಲಂಗಡಿ ತಿನ್ನಬಹುದು. ಅದೂ ತೀರಾ ಜಾಸ್ತಿ ಅಲ್ಲ.
ಶ್ರಮಜೀವಿಗಳಿಗೆ ಯಾವುದೇ ಖರ್ಚು ಇಲ್ಲದೇ 6 ಪ್ಯಾಕ್ ಆಗುತ್ತದೆಯಲ್ಲ ? ಹೌದು. ಆದರೆ ದೇಹ ಪೀಚು ಪೀಚಾಗಿದ್ದು 6 ಪ್ಯಾಕ್ ಆದರೆ ಅದೇನೂ ದೊಡ್ಡದಲ್ಲ. ಮತ್ತು ಮೊದಲೇ ಹೇಳಿದಂತೆ 6 ಪ್ಯಾಕ್ ಎಲ್ಲರಿಗೂ ಇರುತ್ತದೆ.
ಇಡೀ ಜಗತ್ತಿನಲ್ಲಿ ಫ್ಯಾಟ್ ಕಡಿಮೆ ಮಾಡುವ ಯಾವುದೇ ರೀತಿಯ ಆಹಾರ ಇಲ್ಲ. ಲಿಂಬು, ಜೇನುತುಪ್ಪ, ಬಳ್ಳುಳ್ಳಿ, ಸುಂಠಿ ಇವು ಯಾವವೂ ನೇರವಾಗಿ ಫ್ಯಾಟ್ ಕಡಿಮೆ ಮಾಡುವುದಿಲ್ಲ. ಯಾವುದೇ ತರಕಾರಿಯ ರಸ , ಹಣ್ಣಿನ ರಸ ಫ್ಯಾಟ್ ಕಡಿಮೆ ಮಾಡುವುದಿಲ್ಲ. ಆದರೆ ಇವು ಕಡಿಮೆ ಕ್ಯಾಲೋರಿ ಕೊಟ್ಟು ಹೊಟ್ಟೆ ತುಂಬಿಸಿ ಬೇರೆ ಫ್ಯಾಟ್ ಫೂಡ್ ತಿನ್ನದಂತೆ ಆದರೆ ಮಾತ್ರ ಪರೋಕ್ಷವಾಗಿ ಸಹಾಯ ಮಾಡುತ್ತವೆ.
ಎಲ್ಲಕ್ಕಿಂತ ಮುಖ್ಯವಾಗಿ ಹೊಟ್ಟೆಯ ವ್ಯಾಯಾಮ ಮಾಡುವದರಿಂದ ಹೊಟ್ಟೆ ಕಡಿಮೆಯಾಗುವುದು ಅಸಾಧ್ಯ. ಟೀವಿಯಲ್ಲಿ ಹೊಟ್ಟೆಯ ಭಾಗದ ಬೊಜ್ಜು ಕಡಿಮೆ ಮಾಡುವ ಎಲ್ಲಾ ಯಂತ್ರಗಳು ಭೋಗಸ್. ಒಂದು ಸಲ ತೂಕ ಇಳಿಸಿ ಹೊಟ್ಟೆ ಕಡಿಮೆ ಆದ ನಂತರವೇ 6 ಪ್ಯಾಕ್ ಗಳಿಗಾಗಿ ಹೊಟ್ಟೆಯ ವ್ಯಾಯಾಮ ಮಾಡಬೇಕು. ಜಗತ್ತಿನ ಪ್ರತಿಯೊಬ್ಬರೂ ಕೋರ್ ಮಸಲ್ಸ್ ವ್ಯಾಯಾಮ ಮಾಡುವುದು ಉತ್ತಮವಾದರೂ ಇದರ ಉದ್ದೇಶ ಫ್ಯಾಟ್ ಲಾಸ್ ಅಲ್ಲ. ಕೋಟಿಗಟ್ಟಲೇ ಕ್ರಂಚಸ್ ಮಾಡುವುದರಿಂದ ಹೊಟ್ಟೆ ಕಡಿಮೆ ಆಗುವುದಿಲ್ಲ. ಬದಲಿಗೆ ಸ್ಕ್ವಾಟ್ , ಡೆಡ್ ಲಿಫ್ಟ್ ನಂತಹ ವ್ಯಾಯಾಮಗಳು, ಕಾರ್ಡಿಯೋ ಅತ್ಯಂತ ವೇಗವಾಗಿ ಫಲಿತಾಂಶ ನೀಡುತ್ತವೆ. ಹೆಚ್ ಐ ಐ ಟಿ ಕಾರ್ಡಿಯೋ ಅತ್ಯುತ್ತಮ. ಅತೀ ಹೆಚ್ಚು ಸಮಯ ಓಡಿದರೂ ದೇಹ ಫ್ಯಾಟ್ ಬದಲು ಮಸಲ್ಸ್ ಕರಗಿಸುತ್ತದೆ. ಕ್ರಾಸ್ ಫಿಟ್, ಟಬಾಟಾ, ಬರ್ಪೀಸ್ ಇತ್ಯಾದಿ ಮಾಡಬಹುದು.
ನಮ್ಮ ಗುರಿ ಏನಿದೆ ಅನ್ನುವುದರ ಮೇಲೆ ಯಾವ ರೀತಿಯ ವ್ಯಾಯಾಮ ಮಾಡಬೇಕು ಅಂತ ಡಿಸೈಡ್ ಆಗುತ್ತದೆ.
ಉಸೇನ್ ಬೋಲ್ಟ್ ಜಗತ್ತಿನ ಅತ್ಯಂತ ವೇಗದ ಓಟಗಾರ. ಈತ ಮುರಿಯದ ದಾಖಲೆಗಳಿಲ್ಲ. ಆದರೆ ಈವೊತ್ತಿನ ತನಕ ಆತ ಒಂದು ಮೈಲಿ ದೂರವೂ ಓಡಿಲ್ಲವಂತೆ. ಯಾಕೆಂದರೆ ಆತ ಓಡುವುದು ಶಾರ್ಟ್ ಡಿಸ್ಟೆನ್ಸ್ ಮಾತ್ರ. ದೇಹದಲ್ಲಿ ಎರಡು ತರದ ಮಸಲ್ಸ್ ಇರುತ್ತವೆ. ಫಾಸ್ಟ್ ಟ್ವಿಚ್ ಮತ್ತು ಸ್ಲೋ ಟ್ಧಿಚ್. ಕಡಿಮೆ ದೂರ ಹೆಚ್ಚು ವೇಗವಾಗಿ ಓಡಲು ಫಾಸ್ಟ್ ಟ್ವಿಚ್ ಮಸಲ್ಸ್ ಬೇಕಾಗುತ್ತವೆ. ಚಿರತೆಯ ದೇಹದಲ್ಲೂ ಇವೇ ಇರುತ್ತವೆ. ಮ್ಯಾರಥಾನ್ ಓಡಲು ಸ್ಲೋ ಟ್ವಿಚ್ ಮಸಲ್ಸ್ ಬೇಕಾಗುತ್ತವೆ. ಉಸೇನ್ ಬೋಲ್ಟ್ ಮ್ಯಾರಥಾನ್ ಓಡಲಾರಂಭಿಸಿದರೆ ಆತನ ಮಸಲ್ಸ್ ತಕ್ಷಣ ಸ್ಲೋ ಟ್ವಿಚ್ ಆಗಿ ಬದಲಾಗುತ್ತವೆ. ಹಾಗಾಗಿ ಆತನಿಗೆ ವೇಗವಾಗಿ ಓಡಲು ಸಾಧ್ಯ ಆಗುವುದಿಲ್ಲ.
ಇದರ ಹೊರತಾಗಿ ಬಿಳಿ ಫ್ಯಾಟ್ ಮತ್ತು ಕಂದು ಫ್ಯಾಟ್ ಅಂತಿದೆ. ಕಂದು ಫ್ಯಾಟ್ ಒಳ್ಳೆಯದು. ಮಸಲ್ಸ್ ಬೆಳೆಯುವುದಕ್ಕೆ ಹೈಪರಟ್ರೋಫಿ ಅಂತ ಕರೆಯುತ್ತಾರೆ. ಸಾರ್ಕೋಮಿಯರ್ ಹೈಪರಟ್ರೋಫಿ, ಸಾರ್ಕೋಪ್ಲಾಸ್ಮಿಕ್ ಹೈಪರಟ್ರೋಫಿ, ಮಾಯೋಫೈಬ್ರೊಲಾರ ಹೈಪರಟ್ರೋಫಿ ಅಂತೆಲ್ಲಾ ಇದೆ. ಇದರ ಡಿಟೇಲ್ಸಗೆ ಹೋಗುವುದಿಲ್ಲ.
ಇಡೀ ರೈಟ್ ಅಪ್ ಬರೆಯುವಾಗ ನಾನು ಗೂಗಲ್ ಮಾಡಿಲ್ಲ. ಇದರ ಬಗ್ಗೆ ಒಂದು ಪುಸ್ತಕವನ್ನೇ ಗೂಗಲ್ ಸಹಾಯ ಇಲ್ಲದೇ ಬರೆಯಬಲ್ಲೆ.
ತುಂಬಾ ಕನಫ್ಯೂಸ್ ಮಾಡದೇ ಮುಗಿಸುವೆ. 6 ಪ್ಯಾಕ್ ಯ್ಯಾಬ್ಸ್ 80 % ಡಯಟ್, 20 % ಜಿಮ್. ಬಾಡಿಬಿಲ್ಡರ್ಸ್ ಸ್ಟೇಜ್ ಶೋ ಗೆ ಕೊನೆಯ ಏಳು ದಿನ ಇದ್ದಾಗ ನೀರಿನ ಸೇವನೆ ಕಡಿಮೆ ಮಾಡುತ್ತಾರೆ. ಕೊನೆಯ ಎರಡು ದಿನ ಇದ್ದಾಗ ಅನ್ನ ತಿಂದು ಕಾರ್ಬ್ ಲೋಡಿಂಗ್ ಮಾಡುತ್ತಾರೆ. ಸ್ಟೇಜ್ ಮೇಲೆ ಹೋಗುವಾಗ ಒಂದು ಗ್ಲಾಸ್ ವೈನ್ ಕುಡಿಯುತ್ತಾರೆ. 365 ದಿನವೂ ಫಾರ್ಮನಲ್ಲೇ ಇರಲು ಯಾರಿಂದಲೂ ಸಾಧ್ಯವಿಲ್ಲ.
ಯಾವುದೇ ಉಪವಾಸ ಸಲ್ಲ. ನಿಮ್ಮ ಜಿಮ್ ನಲ್ಲಿರುವ ಉಪಕರಣಗಳು ಎಷ್ಟು ಆಧುನಿಕವೋ ಅಷ್ಟು ಪರಿಣಾಮಕಾರಿಯಾಗಿ ಬಾಡಿ ಬಿಲ್ಡ್ ಮಾಡಬಹುದು. ತೀರಾ ಹಳೆಯ ಪದ್ಧತಿ , ಹಳೆಯ ಟೆಕ್ನಾಲಜಿ ಮಷೀನ್ ಗಳಿಂದ ಬಾಡಿ ಮಾಡುವುದೂ ಸಾಧ್ಯ. ಆದರೆ ಇದು ತುಂಬ ಕಠಿಣವಾದ ತ್ರಾಸದಾಯಕ ಹಾದಿ. ಈ ದಾರಿಯಲ್ಲಿ ಸಾಗಿದ ನೂರು ಜನರಲ್ಲಿ ಒಬ್ಬ ಮಾತ್ರ ಗುರಿ ತಲುಪುತ್ತಾನೆ. ಉಳಿದವರು ದೇಹಕ್ಕೆ ಹಾನಿ ಮಾಡಿಕೊಳ್ಳುತ್ತಾರೆ. ನೆನಪಿಡಿ ನೀವು ನೋಡುವ ದೊಡ್ಡ ದೇಹದ ಹೆಚ್ಚಿನ ಬಾಡಿಬಿಲ್ಡರ್ಸ್ ಸ್ಟೆರಾಯ್ಡ್ಯ್ ತೆಗೆದುಕೊಂಡಿರುತ್ತಾರೆ. ಸ್ಟೆರಾಯ್ಡ್ಯ್ ತೆಗೆದುಕೊಳ್ಳದೇ ಮಿಸ್ಟರ್ ವರ್ಲ್ಡ 2015 ಆದ ಠಾಕೂರ ಅನೂಪ ಸಿಂಗ್ ಒಬ್ಬ ಭಾರತೀಯ ಅನ್ನುವುದು ಹೆಮ್ಮೆಯ ವಿಷಯ.
ಕೊನೆಯದಾಗಿ ಟೀವಿಯಲ್ಲಿ ಬರುವ ಯಾವುದೇ ಜಾಹೀರಾತಿನ ವಸ್ತುವೂ ವರ್ಕ್ ಆಗುವುದಿಲ್ಲ. ಅದರಲ್ಲೂ ಸೌನಾ ಬೆಲ್ಟ್ , ನಿಸರ್ಗ ಸ್ಲಿಮ್ಮಿಂಗ್ ಪೌಡರ್ ಗಳು ಅತ್ಯಂತ ದೊಡ್ಡ ಮೋಸವಷ್ಟೇ ಅಲ್ಲದೇ ಅತ್ಯಂತ ಅಪಾಯಕಾರಿ. ಇವುಗಳಿಂದ ಯಾವುದೇ ಲಾಭ ಇಲ್ಲ. ಕೆಲವು ಪ್ರಾಡಕ್ಟಗಳಲ್ಲಿ ಆಯುರ್ವೇದ ದ ಹೆಸರಿನಲ್ಲಿ ಸ್ಟೆರಾಯ್ಡ್ಯ್ ಮಿಕ್ಸ್ ಮಾಡಿರುತ್ತಾರೆ.
ಫ್ಯಾಟ್ ಲಾಸ್ ಗುಳಿಗೆಗಳು ಇವೆ. ಇವುಗಳಲ್ಲಿ ಒಂದೆರಡು ಮಾತ್ರ ಸ್ವಲ್ಪ ಮಟ್ಟಿಗೆ ಪರಿಣಾಮ ಕೊಡುತ್ತವೆ. ಇದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಏನೇ ಆದರೂ ನ್ಯಾಚುರಲ್ ವಿಧಾನವೇ ಸರ್ವಶ್ರೇಷ್ಠ.

ಮೂಲ ಲೇಖಕರು : ಮಮತಾ